ಕರ್ನಾಟಕ ಸರ್ಕಾರ
Government Of Karanataka
Site Map
A+
A
A-
A
Contrast
English
ಪ್ರಾದೇಶಿಕ ಆಯುಕ್ತರ ಕಚೇರಿ ಕಲಬುರಗಿ
Regional Commissioner Office Kalaburagi
More
ಮುಖಪುಟ
ಸಾಮಾನ್ಯ ಮಾಹಿತಿ
ರಾಜಕೀಯ ಮಾಹಿತಿ
ಪ್ರಾವಾಸೋದ್ಯಮ
ಜಿಲ್ಲಾ ವಿವರ
ಕಲಬುರಗಿ
ಬಳ್ಳಾರಿ
ಬೀದರ
ರಾಯಚೂರು
ಕೊಪ್ಪಳ
ಯಾದಗಿರಿ
ನಮ್ಮ ಬಗ್ಗೆ
ಆಯುಕ್ತರ ಪಟ್ಟಿ
ಸಂಸ್ಥೆ ಚಾರ್ಟ
ಸಿಬ್ಬಂದಿ ವಿವರಗಳು
ಪ್ರಾವಾಸೋದ್ಯಮ
ತಲುಪುವ ಬಗೆ
ಪ್ರವಾಸಿ ಸ್ಥಳಗಳು
ದಾಖಲೆಗಳು
RTI
Seniority List
ಅಧಿಕಾರ ಮತ್ತು ಕಾರ್ಯ
ಪ್ರಾದೇಶಿಕ ಆಯುಕ್ತರು
ಜಿಲ್ಲಾಧಿಕಾರಿಗಳು
ಸಹಾಯಕ ಆಯುಕ್ತರು
ತಹಶೀಲದಾರರು
ಕಂದಾಯ ನಿರಿಕ್ಷಕರು
ಗ್ರಾಮ ಲೆಕ್ಕಗರು
ಪಂಚಾಯತ್ ರಾಜ್
ಜಿ.ಪಂ ಅವಲೋಕನ
ಜ.ಪಂ ಆಡಳಿತ ವ್ಯವಸ್ಥೆ
ಜಿ.ಪಂ ಸಂಪರ್ಕ ವಿವರ
ತಾ.ಪಂ ಅವಲೋಕನ
ಗ್ರಾ.ಪಂ ಅವಲೋಕನ
ಪಂಚಾಯತ ಯೋಜನೆಗಳು
ಇಲಾಖೆಗಳು
Close
ಮುಖಪುಟ
ಪ್ರಾದೇಶಿಕ ಆಯುಕ್ತರು
Print
Share
Facebook
Twitter
ಪ್ರಾದೇಶಿಕ ಆಯುಕ್ತರ ಕಛೇರಿ ಕಾರ್ಯಾನಿರ್ವಹಣೆ
ಸಿಬ್ಬಂದಿಗಳ ನಿರ್ವಹಣೆ, ಅಭಿವೃದ್ಧಿ, ತರಬೇತಿ ಮತ್ತು ಕಂದಾಯ ಇಲಾಖೆಯ ಮಾನವ ಸಂಪನ್ಮೂಲದ ಇತರೆ ವಿಷಯಗಳು.
ಜಿಲ್ಲಾ, ಉಪವಿಭಾಗ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಮಟ್ಟದ ಕಂದಾಯದ ಲೆಕ್ಕ ಮತ್ತು ಲೆಕ್ಕಪರಿಶೋಧನೆಗಳ ನಿರ್ವಹಣೆ, ವಾರ್ಷಿಕ ತಪಾಸಣೆ, ಅನಿರೀಕ್ಷಿತ ತಪಾಸಣೆ ಹಾಗೂ ಪರಿಶೀಲನೆ ಮತ್ತು ವಾರ್ಷಿಕ ಕಡ್ಡಾಯ ಜಮಾಬಂದಿ ನಡೆಸುವುದು.
ಈ ಹಿಂದೆ ವಿಭಾಗಾಧಿಕಾರಿಗಳು ವಿವಿಧ ನಿಯಮ- ಅಧಿನಿಯಮಗಳಡಿ ಚಲಾಯಿಸುತ್ತಿದ್ದ ಶಾಸನಬದ್ದ (ಮೇಲ್ಮನವಿ ಮತ್ತು ಪನರಾವಲೋಕನ) ಅಧಿಕಾರ;
ನೋಂದಣೆ ಮತ್ತು ಮುದ್ರಾಂಕ ಶುಲ್ಕ, ಭೂ ಮಾಪನ ಮತ್ತು ಭೂ ದಾಖಲೆಗಳ ಕಾರ್ಯ, ಮುಜರಾಯಿ ಕಛೇರಿಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸಗಳ ಮೇಲುಸ್ತುವಾರಿ ಅಧಿಕಾರ;
ತಪಾಸಣಾ ಪ್ರಾಧಿಕಾರ:- ಅಧೀನ ಕಛೇರಿಗಳಲ್ಲಿ ಕಾನೂನುಬದ್ಧವಾಗಿ, ಸರ್ಕಾರದ ಸೂಚನೆ/ ಆಜ್ಞೆಯ ಪ್ರಕಾರ ಮತ್ತು ಸ್ಥಾಯೀ ಆದೇಶಗಳನ್ವಯ ಕೆಲಸ/ ಕಾರ್ಯನಿರ್ವಹಣೆ ಆಗುತ್ತಿದೆ ಎಂಬ ಬಗ್ಗೆ ತಪಾಸಣೆ ನಡೆಸುವುದು;
ಪ್ರಕೃತಿ ವಿಕೋಪ ಮತ್ತು ಬರಪರಿಹಾರ ವಿಷಯಗಳ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಬೆಳೆ ಕಟಾವು ಪ್ರಯೋಗ ಹಾಗೂ ಭೂ ಕಂದಾಯ ಮಾಫಿ ಕಾರ್ಯಗಳ ಮೇಲುಸ್ತುವಾರಿ;
Sರಾಜ್ಯದಲ್ಲಿನ ಎಲ್ಲಾ ರೀತಿಯ ಚುನಾವಣೆಗಳ ಮೇಲ್ವಿಚಾರಣೆ;
ಭೂ ಮಂಜೂರಾತಿ, ಭೂ ಸ್ವಾಧಿನ, ಭೂ ಸುಧಾರಣೆ, ಭೂ ಕಂದಾಯ ವಸೂಲಿ, ಭೂ ಮಾಪನ ಮತ್ತು ಕಂದಾಯ ಇಲಾಖೆಯ ಗಣಕೀಕರಣ ಕಾರ್ಯಗಳ ಮೇಲುಸ್ತುವಾರಿ;
ತಮ್ಮ ಕಾರ್ಯಕ್ಷೇತ್ರದಲ್ಲಿ ಬರುವ ಜಿಲ್ಲೆ, ಉಪವಿಭಾಗ ಮತ್ತು ತಾಲ್ಲೂಕು ಕಛೇರಿಗಳಿಗೆ ಹಣಕಾಸು ಬಿಡುಗಡೆ, ವಾರ್ಷಿಕ ಆಯವ್ಯಯ ತಯಾರಿಕೆ, ಶಾಸನ ಸಭೆಗಳ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ ಶಾಸಕಾಂಗ ಉಪಸಮಿತಿಗಳಿಗೆ ವರದಿ ನೀಡುವುದು ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲಿಸುವುದು;
ತಮ್ಮ ಕಕ್ಷೆಯಲ್ಲಿ ಬರುವ ಎಲ್ಲಾ ಸರ್ಕಾರಿ ಇಲಾಖೆಗಳ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕನಿಷ್ಠ ತಿಂಗಳಿಗೊಮ್ಮೆಯಂತೆ ವಿಮರ್ಷಿಸುವುದು ಹಾಗೂ ಪರಿಶೀಲಿಸುವುದು;
ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸುವಲ್ಲಿ ಕೊರತೆಯಾದಲ್ಲಿ ಕಾರಣಗಳನ್ನು ಕಂಡುಹಿಡಿದು ಸಕಾಲಿಕ ಪರಿಹಾರೋಪಾಯಗಳನ್ನು ಸೂಚಿಸಿ ಅದರಂತೆ ಕ್ರಮಜರುಗಿಸುವುದು. ಅದಕ್ಕೆ ಸಮಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವುದು.
ಇದೂ ಅಲ್ಲದೆ, ಅಭಿವೃದ್ಧಿ ಇಲಾಖೆಗಳ ತಪಾಸಣೆ, ತನಿಖೆ ಹಾಗೂ ಅವಶ್ಯವಿದ್ದಲ್ಲಿ ಪರಿವೀಕ್ಷಣೆ ನಡೆಸುವುದು;